ಯಾವುದೇ ವಿಳಂಬವಿಲ್ಲದೆ ಜಿ ಎಸ್ ಟಿ ಆರ್-9 ಅನ್ನು ತಯಾರಿಸುವುದನ್ನು ವ್ಯವಹಾರಗಳು ಪ್ರಾರಂಭಿಸಬೇಕು

ಮೇ ಮುಗಿಯಿತು! ಜೂನ್ ಬಂದಿದೆ! ನಿಮ್ಮಂತಹ ಜಿ ಎಸ್ ಟಿ ತೆರಿಗೆದಾರರು ಏನು ತಿಳಿದಿರಬೇಕೆಂದು ಇಲ್ಲಿದೆ :

✔  2017-18 ರ ಹಣಕಾಸು ವರ್ಷದ ಜಿ ಎಸ್ ಟಿ ಆರ್-9 ಅನ್ನು ಸಲ್ಲಿಸುವ ಅಂತಿಮ ದಿನಾಂಕ ಜೂನ್ 30, 2019.

✔ ನೀವು ಸಂಯೋಜನಾ ಯೋಜನೆಯ ತೆರಿಗೆದಾರರು ಅಥವಾ ಇ-ವಾಣಿಜ್ಯ ನಿರ್ವಾಹಕರು ಆಗಿದ್ದರೆ, ನೀವು ಮತ್ತೊಂದು ಫಾರ್ಮ್ (ಜಿ ಎಸ್ ಟಿ ಆರ್-9 ಅಲ್ಲ) ಬಳಸಿಕೊಂಡು ವಾರ್ಷಿಕ ಆದಾಯವನ್ನು ಸಲ್ಲಿಸಬೇಕು.

✔ ನಿಮ್ಮ ವಾರ್ಷಿಕ ವಹಿವಾಟು ರೂ 2 ಕೋಟಿಗಿಂತ ಹೆಚ್ಚು ಇದ್ದರೆ, ನೀವು ಜಿ ಎಸ್ ಟಿ ಆರ್-9 ರ ಜೊತೆಗೆ ಜಿ ಎಸ್ ಟಿ ಆರ್-9ಸಿ ಅನ್ನು ಸಲ್ಲಿಸಬೇಕು.

ಜಿ ಎಸ್ ಟಿ ಆರ್- 9 ಅನ್ನು ಫೈಲ್ ಮಾಡಲು ಏನು ಬೇಕಾಗುತ್ತದೆ?

✔ ಜಿ ಎಸ್ ಟಿ ಆರ್- 9 ಫೈಲ್ ಮಾಡುವುದು ಸರಳವಲ್ಲ! ನಿಮ್ಮ ವ್ಯವಹಾರ ವಹಿವಾಟುಗಳನ್ನುಆರಂಭದಿಂದಲೇ ನೀವು ಸಂಪೂರ್ಣವಾಗಿ ಮರುಪರಿಶೀಲಿಸಬೇಕು.

✔ ಜಿ ಎಸ್ ಟಿ ಆರ್-9 ರಲ್ಲಿ, ಕೆಲವು ಟೇಬಲ್ ಗಳು ಸ್ವಯಂ-ಭರ್ತಿಯಾಗಿರುತ್ತವೆ, ಆದರೆ ಕೆಲವುಗಳನ್ನು ಮೊದಲು ಸಲ್ಲಿಸಿದ ಜಿ ಎಸ್ ಟಿ ಆರ್-1 ಮತ್ತು ಜಿ ಎಸ್ ಟಿ ಆರ್-3ಬಿ ಅನ್ನು ಬಳಸಿಕೊಂಡು ಕೈಯಾರೆ ತುಂಬಬೇಕು.

✔ ನೀವು ಪಾವತಿಸಿದ ತೆರಿಗೆ, ನಿಮ್ಮ ಮಾರಾಟಗಾರರು ಸಲ್ಲಿಸಿದ ಆದಾಯ, ನಿಮ್ಮ ಖಾತೆ ಪುಸ್ತಕಗಳು, ಹಾಗೂ ನಿಮ್ಮ ಜಿ ಎಸ್ ಟಿ ಆರ್-9 ಎಲ್ಲವೂ ಅದೇ ವಿಷಯವನ್ನು ಹೇಳಬೇಕು! ಎಲ್ಲದರಲ್ಲಿರುವ ಮಾಹಿತಿ ಪರಸ್ಪರ ಹೊಂದಾಣಿಕೆಯಾಗಬೇಕು.

✔  ನಿಮ್ಮ ಖಾತೆಗಳ ಪುಸ್ತಕಗಳು ಹಾಗೂ ಜಿ ಎಸ್ ಟಿ ಆರ್-9 ರಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ತಿರಸ್ಕರಿಸಲಾಗುವುದು.

✔ ನಿಮ್ಮ ಜಿ ಎಸ್ ಟಿ ಆರ್-9 ರಲ್ಲಿ ತಪ್ಪುಗಳು ಕಂಡುಬಂದರೆ ನೀವು ತೆರಿಗೆ ಇಲಾಖೆಯಿಂದ ನೋಟೀಸುಗಳನ್ನು ಪಡೆಯುತ್ತೀರಿ.

✔ ನೀವು ಆನ್ಲೈನ್ ನಲ್ಲಿ ತೆರಿಗೆಗಳನ್ನು ಪಾವತಿಸಿದರೆ ಆದರೆ ಜಿ ಎಸ್ ಟಿ ಆರ್-9 ರಲ್ಲಿ ತಪ್ಪುಗಳನ್ನು ಮಾಡಿದ್ದರೆ, ನಿಮ್ಮ ಜಿ ಎಸ್ ಟಿ ಆರ್-9 ತಪ್ಪಾದ ಮಾಹಿತಿಯೊಂದಿಗೆ ಸ್ವಯಂ-ಭರ್ತಿಯಾಗುತ್ತದೆ.

✔ ಬಿ2ಬಿ ಮಾರಾಟ ಮತ್ತು ಬಿ2ಸಿ ಯನ್ನು ಜಿ ಎಸ್ ಟಿ ಆರ್-1 ರ ಮೂಲಕ ತಪ್ಪಾಗಿ ವರದಿ ಮಾಡಲಾಗಿದ್ದರೆ, ಅದನ್ನು ಈಗ ಬದಲಾಯಿಸಲಾಗುವುದಿಲ್ಲ.

✔ ಮುಂಚಿತವಾಗಿಯೇ ತಪ್ಪುಗಳನ್ನು ಗುರುತಿಸಲು, ನಿಮ್ಮ ವ್ಯವಹಾರದ ಡಿಜಿಟಲ್ ನಕಲನ್ನು ನೀವು ನಿರ್ವಹಿಸದಿದ್ದರೆ, ನೀವು ನಿಮ್ಮ ಖಾತೆ ಪುಸ್ತಕಗಳಲ್ಲಿ ಸಾವಿರಾರು ವ್ಯವಹಾರಗಳನ್ನು ಪರಿಶೀಲಿಸಬೇಕಾಗುತ್ತದೆ.

✔ ಒಂದು ಸಂದರ್ಭದಲ್ಲಿ, ನೀವು ವ್ಯಾಪಾರ್ ನಂತಹ ಸ್ಮಾರ್ಟ್ ವ್ಯವಹಾರ ಲೆಕ್ಕಪರಿಶೋಧಕ ಸಾಫ್ಟ್ ವೇರ್ ಅನ್ನು ಬಳಸುತ್ತಿದ್ದರೆ(ಇಲ್ಲಿ ಡೌನ್ಲೋಡ್ ಮಾಡಿ), ಅದು ತ್ವರಿತವಾಗಿ ದೋಷಗಳನ್ನು ಗುರುತಿಸುತ್ತದೆ ಮತ್ತು ದೋಷಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ, ಹಾಗೂ ನಿಮ್ಮನ್ನು ಪಾರು ಮಾಡುತ್ತದೆ!

✔ ನೀವು ಜಿ ಎಸ್ ಟಿ ಆರ್-9 ಅನ್ನು ಬಳಸಿಕೊಂಡು ಹೆಚ್ಚುವರಿ ಐಟಿಸಿ ಅನ್ನು ಪಡೆಯಲು ಸಾಧ್ಯವಿಲ್ಲ.

✔ ಜಿ ಎಸ್ ಟಿ ಆರ್-9 ಅನ್ನು ಸಲ್ಲಿಸುವ ಮೊದಲು ನೀವು ಯಾವುದೇ ಬಾಕಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದ್ದರೆ, ಅದನ್ನು ಮರೆಯದೆ ಮಾಡಬೇಕು.

ಯಾವುದೇ ವಿಳಂಬವಿಲ್ಲದೆಯೇ ಜಿ ಎಸ್ ಟಿ ಆರ್-9 ಅನ್ನು ತಯಾರಿಸಲು ಪ್ರಾರಂಭಿಸಿ! ಅಂತಿಮ ದಿನಾಂಕಕ್ಕೆ ಮುಂಚಿತವಾಗಿ ಜಿ ಎಸ್ ಟಿ ಆರ್-9 ರೊಂದಿಗೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಮೊದಲು ತ್ವರಿತವಾಗಿ ಪರಿಹರಿಸಿ.

ಮುಂಬರುವ ವರ್ಷಗಳಲ್ಲಿ ಸ್ವಚ್ಛ ಮತ್ತು ಒತ್ತಡ ಮುಕ್ತ ವ್ಯವಹಾರ ನಡೆಸಲು ಜಿ ಎಸ್ ಟಿ ಆರ್-9 ರ ಯಶಸ್ವಿ ಫೈಲಿಂಗ್ ನಿಮಗೆ ಸಹಾಯ ಮಾಡುತ್ತದೆ!

www.vyaparapp.in ನಲ್ಲಿ ಇತ್ತೀಚಿನ ಜಿ ಎಸ್ ಟಿ ಸುದ್ದಿಗಳೊಂದಿಗೆ ನವೀಕೃತವಾಗಿರಿ

ಮೂಲ: ಎಕನಾಮಿಕ್ ಟೈಮ್ಸ್

ಹ್ಯಾಪಿ ವ್ಯಾಪಾರಿಂಗ್ !!

You May Also Like

Leave a Reply