ಸಾಮಾನ್ಯ GST(ಜಿ ಎಸ್ ಟಿ) ಅಡಿಯಲ್ಲಿ ನೋಂದಾಯಿಸಲಾಗಿದೆಯೇ?
ನಿಮ್ಮ ಉತ್ತರ ಹೌದು ಆಗಿದ್ದರೆ, ನೀವು ನಿಮ್ಮ GSTR(ಜಿ ಎಸ್ ಟಿ ಆರ್) -1 ರಿಟರ್ನ್ ಗಳನ್ನು ಪ್ರತಿ ತಿಂಗಳ 10ನೇ ತಾರೀಖಿನ ಒಳಗೆ ಫೈಲ್ ಮಾಡಬೇಕು.
GSTR(ಜಿ ಎಸ್ ಟಿ ಆರ್)-1 ಅನ್ನು ನೀವಾಗಿಯೇ ಸಿದ್ಧಪಡಿಸುವುದು ಕಷ್ಟವಾಗಬಹುದು. ಆದರೆ, ವ್ಯಾಪಾರ್ ನಂತಹ ವ್ಯವಹಾರ ಲೆಕ್ಕಪರಿಶೋಧಕ ತಂತ್ರಾಂಶದ (ಬಿಸಿನೆಸ್ ಅಕೌಂಟಿಂಗ್ ಸಾಫ್ಟ್ ವೆರ್) ಮೂಲಕ ನಿರ್ವಹಿಸಿದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಅದನ್ನು ಸುಲಭವಾಗಿ ಮಾಡಬಹುದು!
ವ್ಯಾಪರ್ ಅನ್ನು ಬಳಸಿಕೊಂಡು GSTR(ಜಿ ಎಸ್ ಟಿ ಆರ್)-1 ಅನ್ನು ರಚಿಸಲು 5 ಸುಲಭ ಹಂತಗಳು ಇಲ್ಲಿವೆ:
ಹಂತ 1: ನಿಮ್ಮ ವ್ಯಾಪಾರ್ ಆಪ್ ತೆರೆಯಿರಿ , ಎಡ ಮೆನ್ಯುವಿನಲ್ಲಿ ಸ್ವೈಪ್ ಮಾಡಿ, ವರದಿಗಳ ಮೇಲೆ ಕ್ಲಿಕ್ ಮಾಡಿ, GSTR(ಜಿ ಎಸ್ ಟಿ ಆರ್) ವರದಿಗಳನ್ನು ಪಡೆಯಲು ಕೆಳಗೆ ಸ್ಕ್ರಾಲ್ ಮಾಡಿ ಮತ್ತು GSTR(ಜಿ ಎಸ್ ಟಿ ಆರ್)-1 ಮೇಲೆ ಟ್ಯಾಪ್ ಮಾಡಿ.
ಹಂತ 2: ನೀವು ಈ ವರ್ಷದ ಮೊದಲ ತ್ರೈಮಾಸಿಕ್ಕಾಗಿ GSTR(ಜಿ ಎಸ್ ಟಿ ಆರ್)-1 ಅನ್ನು ರಚಿಸಲು ಬಯಸಿದರೆ, ಇಂದ ಜಾಗದಲ್ಲಿ “ಜನವರಿ 2019″ ಮತ್ತು ಗೆ ಜಾಗದಲ್ಲಿ “ಏಪ್ರಿಲ್ 2019″ ಆಯ್ಕೆಮಾಡಿ.
ಹಂತ 3: ಈಗ, ಸಂಸ್ಥೆಯ ಹೆಸರನ್ನು ಆಯ್ಕೆ ಮಾಡಿ.
ಹಂತ 4: ನಿಮ್ಮ GSTR(ಜಿ ಎಸ್ ಟಿ ಆರ್)-1 ವರದಿಯು ಸಿದ್ಧವಾಗಿದೆ. ನೀಡಿದ ಅವಧಿಯಲ್ಲಿ ನಿಮ್ಮ ಎಲ್ಲಾ ಮಾರಾಟ ಮತ್ತು ಮಾರಾಟದ ರಿಟರ್ನ್ ಗಳನ್ನು ನೀವು ವೀಕ್ಷಿಸಬಹುದು.
ಹಂತ 5: ಈ ವರದಿಯನ್ನು ಪಿಡಿಎಫ್ ಅಥವಾ ಎಕ್ಸೆಲ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ, ಹಂಚಿಕೊಳ್ಳಿ ಅಥವಾ ವೀಕ್ಷಿಸಿ .
ಹಂತ 6: ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು GST(ಜಿ ಎಸ್ ಟಿ ) ಪೋರ್ಟಲ್ (https://www.gst.gov.in/) ಗೆ ಈ GSTR(ಜಿ ಎಸ್ ಟಿ ಆರ್)-1 ವರದಿಯನ್ನು ಅಪ್ಲೋಡ್ ಮಾಡಿ.
ವ್ಯಾಪರ್ ಬಳಸಿ ನಿಮ್ಮ GSTR-3B(ಜಿ ಎಸ್ ಟಿ ಆರ್-3ಬಿ ) ವರದಿಯನ್ನು ರಚಿಸುವುದರ ಪ್ರಯೋಜನಗಳು:
- ನೀವು ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತೀರಿ.
- ನಿಮಗೆ ಅಕೌಂಟಿಂಗ್ ಜ್ಞಾನದ ಅಗತ್ಯವಿಲ್ಲ.
- ನಿಮ್ಮ GSTR-1(ಜಿ ಎಸ್ ಟಿ ಆರ್-1) ರಿಟರ್ನ್ GST(ಜಿ ಎಸ್ ಟಿ) ಪೋರ್ಟಲ್ ನಲ್ಲಿ ಸುಲಭವಾಗಿ ತಿರಸ್ಕರಿಸಲ್ಪಡುವುದಿಲ್ಲ.
- ಈ GSTR(ಜಿ ಎಸ್ ಟಿ ಆರ್)-1ರಿಟರ್ನ್ ಪರಿಶೀಲನೆಗಾಗಿ ಅಕೌಂಟೆಂಟ್ ಜೊತೆ ಸುಲಭವಾಗಿ ಹಂಚಿಕೊಳ್ಳಬಹುದು.