ಹೊಸ ಜಿ ಎಸ್ ಟಿ(GST) ರಿಟರ್ನ್ ಫೈಲಿಂಗ್ ಪ್ರಕ್ರಿಯೆ ವಿಳಂಬವಾಗಿದೆ

ಜಿ ಎಸ್ ಟಿ(GST)  ರಿಟರ್ನ್ ಸಲ್ಲಿಸುವುದು ಯಾವಾಗಲೂ ಕಷ್ಟಕರವಾಗಿತ್ತು! ಹೌದು ಅಲ್ಲವಾ?

ಅದೃಷ್ಟವಶಾತ್, ಸರ್ಕಾರವು ಹೊಸ ಜಿ ಎಸ್ ಟಿ(GST) ರಿಟರ್ನ್ ಫಾರ್ಮ್ ಗಳೊಂದಿಗೆ ಅದನ್ನು ಸರಳಗೊಳಿಸುವ ಭರವಸೆ ನೀಡಿತು. ಇದು ಏಪ್ರಿಲ್ 1, 2019 ರ ಹೊತ್ತಿಗೆ ನಿಮಗೆ ಲಭ್ಯವಿರಬೇಕಾಗಿತ್ತು, ಆದರೆ ಇನ್ನೂ ಆಗಿಲ್ಲ. ಇದು ವಿಳಂಬವಾಗಿದೆ!

ಹೊಸ ಸಾಫ್ಟ್ ವೇರ್ ಸಿಸ್ಟಮ್ 100% ಸಿದ್ಧವಾದ ನಂತರ ಹೊಸ ದಿನಾಂಕವನ್ನು ನಿರ್ಧರಿಸಲಾಗುತ್ತದೆ.

 ಹೊಸ ಪ್ರಕ್ರಿಯೆ ಏನಿರುತ್ತದೆ?

  • ನಿಮ್ಮ ವಾರ್ಷಿಕ ವಹಿವಾಟು ರೂ. 5 ಕೋಟಿ ವರೆಗೆ ಇದ್ದರೆ,  ಜಿ ಎಸ್ ಟಿ ಆರ್ 1(GSTR 1), ಜಿ ಎಸ್ ಟಿ ಆರ್ 2 (GSTR 2) ಮತ್ತು ಜಿ ಎಸ್ ಟಿ ಆರ್ 3( GSTR 3) ಅನ್ನು ಪ್ರತಿ ತಿಂಗಳು ಫೈಲಿಂಗ್ ಮಾಡುವ ಅಗತ್ಯವಿಲ್ಲ. ನೀವು ಈ ಎರಡು ಫಾರ್ಮ್ ಗಳಲ್ಲಿ ಒಂದನ್ನು ಮಾತ್ರ ಫೈಲ್ ಮಾಡಬೇಕಾಗಿದೆ – ಸುಗಮ್ ಮತ್ತು ಸಹಜ್ ಅದು  3 ತಿಂಗಳಿಗೆ ಒಮ್ಮೆ (ತ್ರೈಮಾಸಿಕ).
  • ಸಹಜ್” ರಿಟರ್ನ್ ಫಾರ್ಮ್ ಇರುವುದು B2C ಬಿಸಿನೆಸ್ ಗಾಗಿ ಅಂದರೆ ಗ್ರಾಹಕರಿಗೆ ಪೂರೈಕೆ ಮಾಡುವ ಬಿಸಿನೆಸ್ ಗಳು
  • ಸುಗಮ್” ಇರುವುದು B2B ಬಿಸಿನೆಸ್ ಗಾಗಿ, ಅಂದರೆ ಬಿಸಿನೆಸ್ ಗೆ ಮತ್ತು ಗ್ರಾಹಕರಿಗೂ ಸಹ ಪೂರೈಕೆ ಮಾಡುವ ಬಿಸಿನೆಸ್ ಗಳು.
  • ನೀವು ಇನ್ನೂ  ಜಿ ಎಸ್ ಟಿ ಆರ್_3B (GSTR_3B)ಅನ್ನು ಹೇಗಾದರೂ ಫೈಲ್ ಮಾಡಬೇಕಾಗಿದೆ
  • ನಿಮಗೆ ಯಾವುದೇ ಖರೀದಿಗಳಿಲ್ಲವಾದರೆ, ಔಟ್ ಪುಟ್ ತೆರಿಗೆ ಹೊಣೆಗಾರಿಕೆಯಿಲ್ಲ ಮತ್ತು ಹಣಕಾಸಿನ ವರ್ಷದ ಯಾವುದೇ ತ್ರೈಮಾಸಿಕದಲ್ಲಿ ಇನ್ಪುಟ್ ತೆರಿಗೆ ಕ್ರೆಡಿಟ್ ಇಲ್ಲ ಅಂದರೆ  ಇಡೀ ತ್ರೈಮಾಸಿಕಕ್ಕೇ ಕೇವಲ ಒಂದು ‘ನಿಲ್’ ರಿಟರ್ನ್ ಅನ್ನು ನೀವು ಫೈಲ್ ಮಾಡಬೇಕಾಗಿದೆ.
  • ನೀವು ಎಸ್ ಎಮ್ ಎಸ್ (SMS) ಮೂಲಕ ರಿಟರ್ನ್ ಫೈಲ್ ಮಾಡಬಹುದು. ಇದು ತುಂಬಾ ಸುಲಭ ಅನಿಸುತ್ತೆ .

ಪ್ರಯೋಜನಗಳು ಯಾವುವು?

  • ಸಣ್ಣ ಬಿಸಿನೆಸ್ ಗಳಿಗೆ  ಜಿ ಎಸ್ ಟಿ(GST) ರಿಟರ್ನ್ ಫೈಲಿಂಗ್ ಸುಲಭ ಮತ್ತು ಸರಳವಾಗಿರುತ್ತದೆ.
  • ಯಾವುದೇ  ಅನುಸರಣೆ ಸಮಸ್ಯೆಗಳಿಲ್ಲ.
  • ಮಾರಾಟಗಾರರ ಮತ್ತು ಖರೀದಿದಾರರ ಇನ್ವಾಯ್ಸ್ ಗಳನ್ನು ಸುಲಭವಾಗಿ ಹೊಂದಾಣಿಕೆ ಮಾಡಬಹುದು.

ಇದರ ಬಗ್ಗೆ ನಿಮಗೆ ಅನಿಸಿಕೆ ಏನು? ಕೆಳಗೆ ಕಾಮೆಂಟ್ ಮಾಡಿ.

ಹ್ಯಾಪಿ ವ್ಯಾಪಾರಿಂಗ್!!!
vyaparapp, business accounting, invoicing app. billing, create invoice

You May Also Like

Leave a Reply